Sunday, January 2, 2011

ಇಸಿಟಿ ಜಾರ್ಖಂಡ್ ಯುವತಿ ರೇಪ್ ಕೇಸ್ 4 ಜನ ಸೆರೆ

Electronics city Jharkhand Girl rape case
ಬೆಂಗಳೂರು, ಡಿ.31: ಜಾರ್ಖಂಡ್ ಮೂಲದ ಎಂಬಿಎ ಪದವೀಧರೆ ಕಿಡ್ನಾಪ್ ಹಾಗೂ ಗ್ಯಾಂಗ್ ರೇಪ್ ಕೇಸಿಗೆ ಸಂಬಂಧಿಸಿದಂತೆ ನಾಲ್ವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸಿಸಿಬಿ ಪೊಲೀಸರು ಹಿಡಿದಿದ್ದಾರೆ. ಸೋಮಶೇಖರ್ ಅಲಿಯಾಸ್ ಸೋಮ ಎಂಬಾತನನ್ನು ಬಂಧಿಸಿ ಅವನಿಂದ ಇತರರ ಅಡ್ಡಗಳಿದ್ದ ಹಾದಿಯ ಸುಳಿವು ಪಡೆಯುವಲ್ಲಿ ಇನ್ಸ್ ಪೆಕ್ಟರ್ ವಿಕೆ ವಾಸುದೇವ ಯಶಸ್ವಿಯಾದ ಮೇಲೆ ಸಿಸಿಬಿ ತಂಡ ಈ ಕಾರ್ಯಚಾರಣೆ ನಡೆಸಿದೆ.

ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ಸುಮಾರು 6 ಕಿ.ಮೀ ದೂರದವರೆಗೂ ಸಿನಿಮೀಯ ಮಾದರಿಯಲ್ಲಿ ಹಿಂಬಾಲಿಸಿಕೊಂಡು ಸೋಮನನ್ನು ಇನ್ಸ್ ಪೆಕ್ಟರ್ ವಾಸುದೇವ್ ಬಂಧಿಸಿದ್ದರು. ಸೋಮನಿಂದ ಮಾಹಿತಿ ಪಡೆದು ಶಂಕರ್ ಎಂಬುವವನ ಮೊಬೈಲ್ ಅನ್ನು ಟ್ರಾಪ್ ಮಾಡಿ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಶಂಕರ್ ಇರುವುದು ಬಾಗಲೂರಿನ ಸಮೀಪ ಎಂದು ತಿಳಿದು ಬಂದಿದೆ.

ನಂತರ ಒಬ್ಬೊಬ್ಬರಾಗಿ ಪೊಲೀಸರ ಜಾಲಕ್ಕೆ ಬಿದ್ದಿದ್ದಾರೆ. ಬಂಧಿತರನ್ನು ಮಾಗಡಿ ರಸ್ತೆಯ ಕುಮಾರ್ ಅಲಿಯಾಸ್ ಸಾಂಬರ್(23), ಬಸವರಾಜು(29), ಚಂದ್ರ ಅಲಿಯಾಸ್ ಪೀಣ್ಯ ಚಂದ್ರ(20), ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಂಜನೇಯ ರೆಡ್ಡಿ(20) ಎಂದು ಗುರುತಿಸಲಾಗಿದೆ.

ಮಾಗಡಿ ರಸ್ತೆ, ಕೆಆರ್ ಆಗ್ರಹಾರ, ರಾಜಗೋಪಾಲನಗರ, ವರ್ತೂರು, ಪೀಣ್ಯ, ಹೆಬ್ಬಾಳ, ಕೆಂಪಾಪುರ ಹಾಗೂ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ದುಷ್ಕೃತ್ಯದಲ್ಲಿ ತೊಡಗಿದ್ದರು ಎಂದು ಸೆಂಟ್ರಲ್ ಕ್ರೈಂ ಬ್ರಾಂಚ್(ಸಿಸಿಬಿ) ಪೊಲೀಸರು ತಿಳಿಸಿದ್ದಾರೆ. [ಅತ್ಯಾಚಾರ]
English summary
South-east division Central Crime Branch (CCB) of Bangalore Police have arrested four people who allegedly invovled in Elctronic city 26 year old Jharkhand woman kidnap and gangrape case. Police got clue from after arresting Somashekhar alias Soma in Parappana Agrahara police station limit.

No comments: