Sunday, January 2, 2011

ಯುವಿಗೆ ಸೊಕ್ಕು ಹೆಚ್ಚಂತೆ : ಬ್ರಿಟಿಷ್ ಪತ್ರಿಕೆ

Yuvraj Singh
ಲಂಡನ್, ಜ. 2 : ಬ್ರಿಟಿಷ್ ಪತ್ರಿಕೆಯೊಂದು ಪ್ರಚಲಿತ ಅಹಂ ಮನೋಭಾವವುಳ್ಳ ಆಟಗಾರರ ಪಟ್ಟಿಯನ್ನು ತಯಾರಿಸಿದೆ. ಟಾಪ್-10 ಅಹಂಕಾರಿ ಆಟಗಾರರ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರತಿಭಾವಂತ ಎಡಗೈ ಬ್ಯಾಟುಗಾರ ಯುವರಾಜ್ ಸಿಂಗ್ ಗುರುತಿಸಿಕೊಂಡಿದ್ದಾರೆ.

ಯುವರಾಜ್ ಪ್ರತಿಭಾವಂತ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅವರಲ್ಲಿರುವ ಅಹಂ ಮನೋಭಾವ ಅವರನ್ನು ಆಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉತ್ತಮ ಪ್ರದರ್ಶನ ನೀಡಲು ಈ ಮನೋಭಾವ ತೊಡಕನ್ನುಂಟು ಮಾಡುತ್ತಿದೆ. ಐಪಿಎಲ್‌ ನಲ್ಲೂ ಕೂಡಾ ಯುವರಾಜ್ ಸಿಂಗ್ ತಮ್ಮ ಅಹಂನ್ನು ಪ್ರದರ್ಶಿಸಿದ್ದರು ಎಂದು ಪತ್ರಿಕೆ ಆರೋಪಿಸಿದೆ.

ಯುವರಾಜ್ ಸಿಂಗ್ ನಂತೆಯೇ ಅನೇಕ ಅಹಂ ಮನೋಭಾವವುಳ್ಳ ಕ್ರಿಕೆಟಿಗರು ಬೇರೆ ಬೇರೆ ತಂಡಗಳಲ್ಲಿ ಇದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ ಸನ್ ಕೂಡಾ ಅಹಂನಲ್ಲಿ ಯುವಿಗೆ ಸಮಾನರಾಗಿದ್ದಾರೆ. ಬ್ರಿಟಿಷ್ ಪತ್ರಿಕೆಯಲ್ಲಿ ಬಿಡುಗಡೆ ಮಾಡಿದ ಟಾಪ್-10 ಪಟ್ಟಿಯಲ್ಲಿ ಬಾಕ್ಸಿಂಗ್ ದಂತಕಥೆ ಮುಹಮ್ಮದ್ ಅಲಿ, ರಿಯಲ್ ಮ್ಯಾಡ್ರಿಡ್ ತಂಡದ ಕೋಚ್ ಜೋಸ್ ಮೌರಿನೊ, ಬಾಸ್ಕೆಟ್ ಬಾಲ್‌ ನ ಖ್ಯಾತ ಆಟಗಾರ ಮಿಚೆಲ್ ಜೋರ್ಡಾನ್ ಹಾಗೂ ಗಾಲ್ಫ್ ದಂತಕಥೆ ನಿಕ್ ಫಾಲ್ಢೊ ಜೊತೆಗೆ ಇತರರು ಗುರುತಿಸಿಕೊಂಡಿದ್ದಾರೆ.(ಯುವರಾಜ್ ಸಿಂಗ್)
English summary
Indian batsman Yuvraj Singh finds himself in a rather unflattering list with a British newspaper naming him asone of the 'top 10 sporting egos' of recent times.

No comments: