ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎರಡು ವಿಷಯಕ್ಕೆ ಸಂಬಂಧಿಸಿದಂತೆ ನಿಖರ ಉತ್ತರ ಸರಕಾರದಿಂದ ಬಂದಿಲ್ಲ. ಹೀಗಾಗಿ ಇನ್ನೊಂದು ಸಲ ಪತ್ರ ಬರೆಯುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ನಡೆದಿರುವ ಭೂಹಗರಣ ಹಾಗೂ ಸಚಿವರಾದ ರೆಡ್ಡಿಗಳ ವ್ಯವಹಾರದ ಕುರಿತು ವಿವರಣೆ ಕೇಳಿ ರಾಜ್ಯಪಾಲರು ಸರಕಾರಕ್ಕೆ ಪ್ರತ್ಯೇಕ ಎರಡು ಪತ್ರ ಬರೆದಿದ್ದರು. ಅದಕ್ಕೆ ಮುಖ್ಯಮಂತ್ರಿ ಸಂಕ್ಷಿಪ್ತವಾಗಿ ಉತ್ತರ ನೀಡಿದ್ದರು.
ರಾಜ್ಯಪಾಲರು ಚುನಾವಣೆಗೆ ಸ್ಪರ್ಧಿಸಲಿ : ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ರಾಜ್ಯಪಾಲರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಪ್ರತಿಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ಈ ಬಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬೇಕಿದ್ದರೆ ಸ್ಪರ್ಧಿಸಲಿ ಎಂದು ವ್ಯಂಗ್ಯವಾಡಿದ್ದರು.
ಈಗಾಗಲೇ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಯಾವುದೇ ರೀತಿಯ ಅಕ್ರಮ ಗಣಿಗಾರಿಕೆಯಾಗಲಿ, ಭೂ ಹಗರಣವಾಗಲಿ ನಡೆದಿಲ್ಲ ಎಂದು ಪತ್ರದ ಮೂಲಕ ತಿಳಿಸಿದ್ದರಲ್ಲದೆ, ಗಣಿ ರೆಡ್ಡಿಗಳ ಗಣಿಗಾರಿಕೆ ರಾಜ್ಯದಲ್ಲಿ ನಡೆಯುತ್ತಿಲ್ಲ. ಅವರ ಎಲ್ಲ ಗಣಿಗಾರಿಕೆ ಆಂಧ್ರದಲ್ಲಿ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಹೀಗಿದ್ದರೂ ಸರಕಾರದ ಪತ್ರ ತೃಪ್ತಿ ತಂದಿಲ್ಲ ಎಂದರೆ ಹೇಗೆ ಎಂದು ಈಶ್ವರಪ್ಪ ಹರಿಹಾಯ್ದಿದ್ದಾರೆ

No comments:
Post a Comment