Showing posts with label ಹನೀಫ್ ಗೆ ಆಸೀಸ್ ಪರಿಹಾರ; ಕುಟುಂಬಕ್ಕೆ ಸಂತಸ. Show all posts
Showing posts with label ಹನೀಫ್ ಗೆ ಆಸೀಸ್ ಪರಿಹಾರ; ಕುಟುಂಬಕ್ಕೆ ಸಂತಸ. Show all posts

Thursday, December 23, 2010

ಹನೀಫ್ ಗೆ ಆಸೀಸ್ ಪರಿಹಾರ; ಕುಟುಂಬಕ್ಕೆ ಸಂತಸ

Dr Haneef gets compensation
ಬೆಂಗಳೂರು, ಡಿ.22: ಗ್ಲಾಸ್ಗೊ ವಿಮಾನ ನಿಲ್ದಾಣದ ಮೇಲೆ 2007ರ ಜೂನ್‌ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ವಿನಾಕಾರಣ ಬಂಧಿಸಲ್ಪಟ್ಟಿದ್ದ ಬೆಂಗಳೂರಿನ ಡಾ.ಮೊಹಮ್ಮದ್ ಹನೀಫ್‌ಗೆ ಆಸ್ಟ್ರೇಲಿಯಾ ಸರ್ಕಾರ ಪರಿಹಾರ ನೀಡುತ್ತಿರುವುದಕ್ಕೆ ಅವರ ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರ ಹನೀಫ್‌ಗೆ ಪರಿಹಾರ ನೀಡುತ್ತಿರುವುದು ಕುಟುಂಬ ಸದಸ್ಯರಲ್ಲಿ ಸಂತಸ ಮೂಡಿಸಿದೆ ಎಂದು ನಗರದ ಬಿಟಿಎಂ ಲೇಔಟ್ ಎರಡನೇ ಹಂತದ ನಿವಾಸಿ ಹನೀಫ್ ಪತ್ನಿಯ ಸಹೋದರಿ ಅಸ್ಮಾ ಅವರು ಹೇಳಿದ್ದಾರೆ. 2007ರ ಭಯೋತ್ಪಾದನಾ ದಾಳಿಯಲ್ಲಿ ಹನೀಫ್ ಅವರ ಪಾತ್ರವಿಲ್ಲದಿದ್ದರೂ ಅವರನ್ನು ಬಂಧಿಸಿದ್ದರಿಂದ ಮಾನಸಿಕವಾಗಿ ಸಾಕಷ್ಟು ಆಘಾತವಾಗಿತ್ತು. ಹನೀಫ್ ಬಂಧನದಿಂದ ಕುಟುಂಬ ಸದಸ್ಯರಿಗೆ ಆಗಿದ್ದ ನೋವು ಹಾಗೂ ಅವಮಾನವನ್ನು ಮರೆಯಲು ಸಾಧ್ಯವಿಲ್ಲ. ಘಟನೆಯ ಬಗ್ಗೆ ಆಸ್ಟ್ರೇಲಿಯಾ ಪೊಲೀಸರು ಮೊದಲೇ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದರೇ ಈ ಅಚಾತುರ್ಯ ನಡೆಯುತ್ತಿರಲಿಲ್ಲ ಎಂದು ಅಸ್ಮಾ ಅಭಿಪ್ರಾಯಪಟ್ಟರು.

ಗ್ಲಾಸ್ಗೋ ಉಗ್ರರ ದಾಳಿಗೂ ಡಾ.ಹನೀಫ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸಾಬೀತಾಗಿದ್ದು, ಆಸ್ಟ್ರೇಲಿಯಾ ಸರ್ಕಾರ ಸಾರ್ವಜನಿಕವಾಗಿ ಹನೀಫ್ ಅವರ ಕ್ಷಮೆಯಾಚಿಸಲು ಒಪ್ಪಿಕೊಂಡಿದೆ ಎಂದು ಹನೀಫ್ ಅವರ ವಕೀಲ ರಾಡ್ ಹಡ್ಗ್ ಸನ್ ಹೇಳಿದ್ದಾರೆ. ಆದರೆ, ಪರಿಹಾರ ಧನದ ಮೊತ್ತದ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ. ಆಸೀಸ್ ಮಾಧ್ಯಮಗಳ ವರದಿಯಂತೆ ಸುಮಾರು 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹಣ ಹನೀಫ್ ಅವರಿಗೆ ಸಿಗಲಿದೆ.
English summary
The Australian government has announced compensation for Dr Mohammad Haneef three years after his arrest. Haneef relatives in Bengaluru are happy for getting back honour. Haneef was arrested in Australia allegedly for having links with terror groups.