Showing posts with label ಬಗಾನ್ ನಿರ್ದೇಶಕ ಸ್ಥಾನಕ್ಕೆ ಮಲ್ಯ ರಾಜೀನಾಮೆ. Show all posts
Showing posts with label ಬಗಾನ್ ನಿರ್ದೇಶಕ ಸ್ಥಾನಕ್ಕೆ ಮಲ್ಯ ರಾಜೀನಾಮೆ. Show all posts

Tuesday, December 21, 2010

ಬಗಾನ್ ನಿರ್ದೇಶಕ ಸ್ಥಾನಕ್ಕೆ ಮಲ್ಯ ರಾಜೀನಾಮೆ

ನವದೆಹಲಿ, ಡಿ. 21 : ಎರಡು ವೃತ್ತಿಪರ ಫುಟ್ಬಾಲ್ ಕ್ಲಬ್‌ ಗಳಿಗೆ ನಿರ್ದೇಶಕರಾಗಿದ್ದ ಉದ್ಯಮಿ ವಿಜಯ ಮಲ್ಯ ಕೊನೆಗೂ ಮೋಹನ್ ಬಗಾನ್‌ ತಂಡದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ತಮ್ಮ ಮಗ ಸಿದ್ಧಾರ್ಥ ಮಲ್ಯ ಅವರನ್ನು ನೇಮಕಗೊಳಿಸುವಲ್ಲಿ ವಿಜಯ್ ಮಲ್ಯ ಯಶಸ್ವಿಯಾಗಿದ್ದಾರೆ.

ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ವೃತ್ತಿಪರ ಪುಟ್ಬಾಲ್ ಕ್ಲಬ್‌ ನ ಪದಾಧಿಕಾರಿಯಾಗಿದ್ದ ಮಲ್ಯ ಇದೀಗ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಎಎಫ್‌ಸಿ) ನ ನಿಯಮದಂತೆ ಮೋಹನ್ ಬಗಾನ್ ನಿರ್ದೇಶಕ ಸ್ಥಾನವನ್ನು ತೊರೆದಿದ್ದಾರೆ. ಆದರೆ, ಈಸ್ಟ್ ಬೆಂಗಾಲ್ ಕ್ಲಬ್‌ ನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಮಲ್ಯ ನಿರ್ದೇಶಕ ಹುದ್ದೆ ತ್ಯಜಿಸಿದ ನಂತರ ಮೋಹನ್ ಬಗಾನ್‌ ನ ಆಡಳಿತ ಮಂಡಳಿ ಯುನೈಟೆಡ್ ಮೋಹನ್ ಬಗಾನ್ ಫುಟ್ಬಾಲ್ ಟೀಮ್ ಪ್ರೈವೇಟ್ ಲಿಮಿಟೆಡ್ ಸಭೆ ಸೇರಿ ವಿಜಯ್ ಮಲ್ಯ ಉತ್ತರಾಧಿಕಾರಿಯಾಗಿ ಅವರ ಮಗ ಸಿದ್ಧಾರ್ಥ ಮಲ್ಯನನ್ನು ಆಯ್ಕೆ ಮಾಡಿದೆ

Vijay Mallya