Showing posts with label ಡಿ.21ರಂದು ಬೆಂಗಳೂರಲ್ಲಿ ಉಚಿತ ಆರೋಗ್ಯ ಶಿಬಿರ. Show all posts
Showing posts with label ಡಿ.21ರಂದು ಬೆಂಗಳೂರಲ್ಲಿ ಉಚಿತ ಆರೋಗ್ಯ ಶಿಬಿರ. Show all posts

Tuesday, December 21, 2010

ಡಿ.21ರಂದು ಬೆಂಗಳೂರಲ್ಲಿ ಉಚಿತ ಆರೋಗ್ಯ ಶಿಬಿರ

ಬೆಂಗಳೂರು, ಡಿ. 20 : ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೈಭವ ಪ್ರಾಣ ಚೈತನ್ಯ ಚಿಕಿತ್ಸಾ ಕೇಂದ್ರವು 21 ರಂದು ಬೆಳಗ್ಗೆ 10.30ರಿಂದ ರಾತ್ರಿ 8.30ರವರೆಗೆ ಕೇಂದ್ರದ ಆವರಣದಲ್ಲಿ ಉಚಿತ ಪ್ರಾಣ ಚೈತನ್ಯ ಚಿಕಿತ್ಸೆ ಶಿಬಿರವನ್ನು ಆಯೋಜಿಸಿದೆ.

ಕ್ಯಾನ್ಸರ್, ರಕ್ತದೊತ್ತಡ, ಪಾರ್ಕಿನ್ಸನ್, ಮೂತ್ರಪಿಂಡ ತೊಂದರೆ, ಸಕ್ಕರೆ ರೋಗ, ಮಾನಸಿಕ ತೊಂದೆರೆ, ಬೊಜ್ಜು, ಏಡ್ಸ್, ಮೂರ್ಛೆರೋಗ, ಮೂಲವ್ಯಾಧಿ, ಮೈಗ್ರೆನ್, ಅಸ್ತಮಾ, ಬೆನ್ನು ನೋವು, ಪಾರ್ಶ್ವವಾಯು, ನಿದ್ರಾಹೀನತೆ, ಮಾನಸಿಕ ಒತ್ತಡ, ಮಂಡಿನೋವು ವಿದ್ಯಾರ್ಥಿಗಳ ನೆನಪಿನ ಶಕ್ತಿ ಕೊರತೆ ಮುಂತಾದ ತೊಂದರೆಗಳೂ ಸೇರಿದಂತೆ ಮಹಿಳೆಯರ ಸೌಂದರ್ಯ ವೃದ್ಧಿಗೆ ವಿಶೇಷ ಸಲಹೆ ಸೂಚನೆಗಳನ್ನು ಸಹ ಕೇಂದ್ರ ನೀಡಲಿದೆ.

ಶಿಬಿರ ನಡೆಯುವ ಸ್ಥಳ : ನಂ.317/5, 1 ನೇ ಎಫ್ ಕ್ರಾಸ್, ಆರ್ ಪಿಸಿ ಬಡಾವಣೆ, ವಿಜಯನಗರ ಪಶ್ಚಿಮ, ಬಸ್ ಡಿಪೋ ಸಮೀಪ, ದೂರವಾಣಿ ಸಂಖ್ಯೆ-96321 21680, 32431950 ಸಂಪರ್ಕಿಸಿ
Bangalore-Karnataka