ಬೆಂಗಳೂರು, ಡಿ. 20 : ಇದೊಂದು ಬಾಕಿಯಿತ್ತು! ಏರಿರುವ ವಿದ್ಯುತ್, ನೀರು, ಹಾಲು, ಪೆಟ್ರೋಲ್, ಹೊಟೇಲ್ ತಿಂಡಿ, ಈರುಳ್ಳಿ ದರಗಳು ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನತೆಯನ್ನು ಕಕ್ಕಾಬಿಕ್ಕಿಯಂತಾಗಿ ಮಾಡಿರುವ ಸಂದರ್ಭದಲ್ಲಿ ಬಂದಿದೆ ಬರುತಿದೆ ಹೊಸವರ್ಷದ ಬಳುವಳಿಯಾಗಿ ಅಡುಗೆ ಅನಿಲ ದರದ ಏರಿಕೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಬೆಲೆ ಶೇ. 66ರಷ್ಟು ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಅದರ ಬೆಲೆಯನ್ನು ಶೇ.50ರಷ್ಟು ಅಥವಾ ಅದಕ್ಕೂ ಹೆಚ್ಚು ಮಾಡದೆ ಸರಕಾರಕ್ಕೆ ಬೇರೆ ದಾರಿಯೇ ಉಳಿದಿಲ್ಲ. ಆದರೆ ಈ ಕುರಿತು ಅಂತಿಮ ನಿರ್ಧಾರವನ್ನು ಬುಧವಾರ ತೆಗೆದುಕೊಳ್ಳಲಿದೆ. ಈ ಮೂಲದ ಪ್ರಕಾರ, ಅಡುಗೆ ಅನಿಲದ ಬೆಲೆ ಶೇ.100ರಷ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ!
ಪ್ರಸ್ತುತ, ಬೆಂಗಳೂರಿನಲ್ಲಿ ಅಡುಗೆ ಅನಿಲದ ಬೆಲೆ ಒಂದು ಸಿಲಿಂಡರಿಗೆ 360ರಷ್ಟಿದೆ. ಕನಿಷ್ಠ ಶೇ.50ರಷ್ಟು ಬೆಲೆಯಲ್ಲಿ ಹೆಚ್ಚಾದರೂ ರು.500 ಸಹಜವಾಗಿ ದಾಟುತ್ತದೆ. ಈ ಬೆಲೆಯ ಮೇಲೆ ಅಡುಗೆ ಅನಿಲವನ್ನು ಬಾಲಿಗವರೆಗೆ ತಂದು ಇಕ್ಕುವವನಿಗೆ 15ರಿಂದ 20 ರು. ದಕ್ಷಿಣೆ ಬೇರೆ. ಅದರೊಂದಿಗೆ ಹೊಸ ವರುಷವನ್ನು ಸಂಭ್ರಮದಿಂದ ಆಚರಿಸಬೇಕೆಂದು ಯೋಜನೆ ಹಾಕಿಕೊಂಡವರ ಉತ್ಸಾಹ ಅನಿಲದಂತೆ ಟುಸ್ ಆಗುವುದು ನಿಶ್ಚಿತ.
ಈ ಏರಿಕೆಯಿಂದಾಗಿ ಇನ್ನೂ ಯಾವ್ಯಾವ ದರಗಳು ಆಕಾಶದ ಮೇಲೇರಿ ಕುಳಿತುಕೊಳ್ಳುತ್ತವೆ ಎಂಬುದನ್ನು ನೀವೇ ಊಹಿಸಿ.

No comments:
Post a Comment