
ನವದೆಹಲಿ, ಡಿ.20: ಅಧಿಕೃತವಾಗಿ ಮಧ್ಯಪ್ರದೇಶ ರಾಜ್ಯವನ್ನು ’ಅತ್ಯಾಚಾರಿಗಳ ರಾಜ್ಯ’ ಎಂದು ಘೋಷಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ(NCRB} ಬಿಡುಗಡೆ ಮಾಡಿದ ಅಧಿಕೃತ ಮಾಹಿತಿ ಪ್ರಕಾರ ಮಧ್ಯಪ್ರದೇಶದಲ್ಲಿ ಕ್ರೈಂ ಮಟ್ಟ ಮಿತಿ ಮೀರುತ್ತಿದೆ. 18 ರಿಂದ 30 ವಯಸ್ಸಿನ ಹೆಂಗಸರು ಮಧ್ಯಪ್ರದೇಶದಲ್ಲಿ ಬಾಳುವುದು ಕಷ್ಟ ಎನಿಸಿದೆ. ನಾಗಾಲ್ಯಾಂಡ್ ನಲ್ಲಿ ಅತಿ ಕಡಿಮೆ 19 ಕೇಸುಗಳು ದಾಖಲಾಗಿದೆ ಎಂದು ಮಾಹಿತಿ ಹೊರಹಾಕಲಾಗಿದೆ.
ಮಧ್ಯಪ್ರದೇಶದಲ್ಲಿ 2,937 ಕೇಸುಗಳು ದಾಖಲಾಗಿದ್ದು, ಕ್ರೈಂ ಪ್ರಮಾಣದಲ್ಲಿ ಶೇ. 13.7ರಷ್ಟು ಪ್ರಗತಿ ಕಂಡಿರುವುದು ಆತಂಕಕಾರಿಯಾಗಿದೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಲದಲ್ಲಿ 2,263 ಕೇಸು ಹಾಗೂ ಉತ್ತರ ಪ್ರದೇಶದಲ್ಲಿ 1,871 ಕೇಸು ದಾಖಲಾಗಿದೆ. ಉಳಿದಂತೆ ಮಹಾರಾಷ್ಟ್ರ (1,558), ಅಸ್ಸಾಂ(1,438), ರಾಜಸ್ಥಾನ(1,355) ಹಾಗೂ ಬಿಹಾರ(1,302) ನಂತರದ ಸ್ಥಾನದಲ್ಲಿವೆ. ನಾಗಾಲ್ಯಾಂಡ್ ನಲ್ಲಿ ಕೇವಲ 19 ಪ್ರಕರಣಗಳು ದಾಖಲಾಗಿದೆ.
ಎನ್ ಸಿಆರ್ ಬಿ ದಾಖಲೆಗಳು ಹೊರಬೀಳುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮೇಲೆ ಎಲ್ಲರೂ ಕೆಂಗಣ್ಣು ಬೀರಲಾರಂಭಿಸಿದ್ದು ಆಗಿದೆ. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವೆ ಕೃಷ್ಣಾ ತೀರ್ಥ್" ಅತ್ಯಾಚಾರ ಮಹಿಳೆಯರ ಮೇಲೆ ನಡೆಸುವ ಅತ್ಯಂತ ಹೀನ ಹಾಗೂ ಕ್ರೂರ ಕೃತ್ಯವಾಗಿದೆ. ಇದರಿಂದ ಆಕೆಯ ವ್ಯಕ್ತಿತ್ವ ಅಲ್ಲದೆ ಸಾಮಾಜಿಕ ನೆಲೆಯನ್ನು ಕಿತ್ತುಕೊಂಡತ್ತಾಗುತ್ತದೆ. ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ರಾಷ್ಟ್ರೀಯ ಮಹಿಳಾ ಆಯೋಗ ಒಂದು ಸಮಿತಿಯನ್ನು ರಚಿಸಿದ್ದು, ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನೆಲೆ ಹಾಗೂ ತ್ವರಿತವಾಗಿ ಆರ್ಥಿಕ ಸಹಾಯ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.
No comments:
Post a Comment