ಬೆಂಗಳೂರು, ಡಿ. 21 : ಇಂಡಿಯನ್ ಪ್ರಿಮಿಯರ್ ಲೀಗ್ ನ ನಾಲ್ಕನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಕೊನೆಗೂ ದಿನ ನಿಗದಿಯಾಗಿದ್ದು, ಜ.8 ಮತ್ತು 9ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಒಟ್ಟು 410 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿದ್ದಾರೆ. ಐಪಿಎಲ್ ನಿಯಮಾವಳಿಯಂತೆ ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ. ಇದರಲ್ಲಿ ಮೂವರು ಭಾರತದ ಆಟಗಾರರನ್ನು ತಂಡಕ್ಕೆ ಮರಳಿ ಸೇರಿಸಿಕೊಳ್ಳಬಹುದಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತನ್ನ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ನಾಯಕ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಲಂಕಾದ ವೇಗಿ ಲಸಿತ್ ಮಾಲಿಂಗ ಮತ್ತು ವೆಸ್ಟ್ ಇಂಡೀಸ್‌ನ ಕೆ ಪೊಲಾರ್ಡ್ ಮರಳಿ ಸ್ಥಾನ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ನಾಯಕ ಎಂ ಎಸ್ ಧೋನಿ, ಸುರೇಶ್ ರೈನಾ, ಮುರಳಿ ವಿಜಯ್, ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಮಾರ್ಕೆಲ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.
ದಿಲ್ಲಿ ಡೇರ್ ಡೆವಿಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹವಾಗ್, ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರಾಟ್ ಕೊಹ್ಲಿ, ರಾಜಸ್ಥಾನ ರಾಯಲ್ಸ್ ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಗಳಾದ ಶೇನ್ ವಾಟ್ಸನ್ ಮತ್ತು ಶೇನ್ ವಾರ್ನ್ ರನ್ನು ತಂಡದಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿದೆ.

No comments:
Post a Comment