ನವದೆಹಲಿ,ಡಿ. 21 : ಭಾರತದಲ್ಲಿ ಈರುಳ್ಳಿ ಕೊರತೆ ಉಂಟಾಗಿದ್ದರಿಂದ ಪಾಕಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಇದೇ ಪ್ರಥಮ ಬಾರಿಗೆ ಭಾರತ ಪಾಕಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಂಡಿದೆ.
ಭಾರತದ ಉದ್ಯಮಿಗಳು ಲಾಹೋರ್ ನಿಂದ ಈರುಳ್ಳಿಯನ್ನು ಖರೀದಿಸಿದ್ದು, ಅವು ದಿಲ್ಲಿ ಹಾಗೂ ಪಂಜಾಬ್ ನ ಲೂಧಿಯಾನಾ, ಅಮೃತಸರ, ಜಲಂಧರ್ ನಗರಗಳಿಗೆ ಪೂರೈಕೆ ಆಗಲಿದೆಯೆಂದು ಕಸ್ಟಮ್ಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಟ್ರಕ್‌ನಲ್ಲಿಯೂ 5 ರಿಂದ 15 ಟನ್ ಗಳಷ್ಟು ಈರುಳ್ಳಿಯನ್ನು ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದಿಂದ ಆಗಮಿಸಿರುವ ಈರುಳ್ಳಿಯ ವೆಚ್ಚ ಕೆಜಿಗೆ 18-20 ರುಪಾಯಿಗಳಾಗಿದ್ದು, ಕಸ್ಟಮ್ಸ್ ಸುಂಕ, ಸೆಸ್, ಸಾರಿಗೆ ಹಾಗೂ ನಿರ್ವಹಣಾ ಶುಲ್ಕಗಳು ಇವೆಲ್ಲವನ್ನೂ ಅವು ಒಳಗೊಂಡಿವೆ. ಭಾರತವು ಈ ವರ್ಷದಲ್ಲಿ ಈರುಳ್ಳಿಯನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವುದಾಗಿ ಸ್ಥಳೀಯ ಆಮದು ಉದ್ಯಮಿಗಳು ತಿಳಿಸಿದ್ದಾರೆ. ಈ ವರ್ಷದ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಭಾರತವು ಪಾಕಿಸ್ತಾನಕ್ಕೆ ಈರುಳ್ಳಿಯನ್ನು ರಫ್ತು ಮಾಡಿತ್ತು.

No comments:
Post a Comment