ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ವೃತ್ತಿಪರ ಪುಟ್ಬಾಲ್ ಕ್ಲಬ್ ನ ಪದಾಧಿಕಾರಿಯಾಗಿದ್ದ ಮಲ್ಯ ಇದೀಗ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಎಎಫ್‌ಸಿ) ನ ನಿಯಮದಂತೆ ಮೋಹನ್ ಬಗಾನ್ ನಿರ್ದೇಶಕ ಸ್ಥಾನವನ್ನು ತೊರೆದಿದ್ದಾರೆ. ಆದರೆ, ಈಸ್ಟ್ ಬೆಂಗಾಲ್ ಕ್ಲಬ್ ನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಮಲ್ಯ ನಿರ್ದೇಶಕ ಹುದ್ದೆ ತ್ಯಜಿಸಿದ ನಂತರ ಮೋಹನ್ ಬಗಾನ್ ನ ಆಡಳಿತ ಮಂಡಳಿ ಯುನೈಟೆಡ್ ಮೋಹನ್ ಬಗಾನ್ ಫುಟ್ಬಾಲ್ ಟೀಮ್ ಪ್ರೈವೇಟ್ ಲಿಮಿಟೆಡ್ ಸಭೆ ಸೇರಿ ವಿಜಯ್ ಮಲ್ಯ ಉತ್ತರಾಧಿಕಾರಿಯಾಗಿ ಅವರ ಮಗ ಸಿದ್ಧಾರ್ಥ ಮಲ್ಯನನ್ನು ಆಯ್ಕೆ ಮಾಡಿದೆ

No comments:
Post a Comment